English

ಬೆಂಗಳೂರು ಸಂಚಾರ ಪೊಲೀಸ್

ಸಂಚಾರ ನಿರ್ವಹಣಾ ಸ್ಥಾನಿಕ ಸಂಸ್ಥೆಗಳು - ಪೊಲೀಸರ ಸಹಯೋಗದೊಂದಿಗೆ

ಬೆಂಗಳೂರು ನಗರದಲ್ಲಿ ವಾಹನಗಳು ಸುರಕ್ಷವಾಗಿ ಹಾಗೂ ಸುಗಮವಾಗಿ ಹಾದು ಹೋಗುವ ದಿಸೆಯಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ನಿವಾರಿಸಲು ಸಂಚಾರ ನಿರ್ವಹಣಾ ಸ್ಥಾನಿಕ ಸಮಿತಿಗಳನ್ನು ರೂಪಿಸಲಾಗಿದ್ದು, ಈ ಸಮಿತಿಯು ಪ್ರಾಣಾಂತಿಕ ಮತ್ತು ಸಾಮನ್ಯ ಅಪಘಾತಗಳನ್ನು ಕಡಿಮೆ ಮಡವ ಉದ್ದೇಶದಿಂದ ರಚಿಸಲಾಗಿದೆ.

ಈ ಸಮಿತಿಯು ಈ ಕೆಳಕಂಡ ಸದಸ್ಯರಿಂದ ಕೂಡಿದೆ:

(a) ಆಯ ವಲಯದ ಠಾಣಾ ಸಂಚಾರಿ ಇನ್ಸ್‌ಪೆಕ್ಟರ್‌ಗಳು

(b)ಸ್ಥಳೀಯ ನಿವಾಸಿಗಳಾಗಿರುವ ಸಂಚಾರಿ ಪ್ರತಿಪಾಲಕರು

(c)ನಿವೃತ್ತ ಅಥವಾ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳು

(d) ಅಲ್ಲಿನ ವಾಸಿಗಳಾಗಿರುವ ನಿವೃತ್ತ ಇಲ್ಲವೇ ಸರ್ಕಾರಿ ನೌಕರರು

(e) ಆ ಪ್ರದೇಶದ ಮಹಾನಗರಪಾಲಿಕೆಯ ಸದಸ್ಯರು

(f) ಕನಿಷ್ಟ ಅಲ್ಲಿನ ೧೦ ಅಂಗಡಿಗಳ ಮಲೀಕರು

(g)ಆ ಭಾಗದ ಸಾರಿಗೆ ನಿರ್ವಹಣೆ ಮತ್ತು ಅಬಿsವದ್ದಿಯಲ್ಲಿ ಉಪಂಗಕರವಾಗುವಂತಹ ಒಬ್ಬ ಸಾರಿಗೆ ಇಂಜಿನಿಯರ್.

ಈ ಸಮಿತಿಯ ಸದಸ್ಯರು ೧೫ ದಿನಗಳಿಗೊಮ್ಮೆ ಸೇರಿ ಆ ವಲಯದ ಪರಿಶೀಲನೆ ಮಾಡಿ, ಸಾರಿಗೆ ಸಮಸ್ಯೆಗಳೇನದಾರೂ ಇದ್ದರೆ ಅವನ್ನು ಗುರುತಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡು ಕೊಂಡು ಅನಂತರ ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಪರಿಹಾರವನ್ನು ಕಾರ್ಯಗತಗೊಳಿಸುತ್ತಾರೆ. ಈ ಸಮಿತಿಗಳು ಅಗತ್ಯವಾದ ಮಾರ್ಗದರ್ಶನ ಫಲಕಗಳನ್ನು ಹಾಕುವಲ್ಲಿ ತಮ್ಮ ಕಾಲುಹಾದಿಗೆ ಕಟಾಂಜನ ನಿರ್ಮಿಸುವ, ಸಿಗ್ನಲ್ ದೀಪಗಳನ್ನು ಒದಗಿಸುವ, ರಸ್ತೆ ಹಾಗೂ ಸಾರಿಗೆ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ, ಈ ದಿಸೆಯಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತವೆ. ಉತ್ತಮ ಸಾರಿಗೆ ನಿರ್ವಹಣೆಯು ಹೇಗಿರಬೇಕೆಂಬುಂದನ್ನು ತೋರಿಸಿ ಕನಿಷ್ಠ ಒಂದು ವಿಭಾಗ ಇಲ್ಲವೇ ರಸ್ತೆಯನ್ನಾದರೂ ಆರಿಸಿಕೊಂಡು ಅದನ್ನು ಉಳಿದ ವಿಭಾಗ ಇಲ್ಲವೇ ರಸ್ತೆಗಳಿಗೆ ಮಾದರಿಯಗುವಂತೆ ಅಭಿವೃದ್ಧಿಪಡಿಸಬೇಕು. ತುಂಬಾ ದೊಡ್ಡ ಸಮಸ್ಯೆಗಳೇನಾದರೂ ಇದ್ದರೆ, ಸಮಿತಿಯು ಅವುಗಳನ್ನು ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಜಲ ಮತ್ತು ಒಳಚರಂಡಿ ಮಂಡಳಿ ಇವುಗಳ ನೆರವು ಪಡೆಯಬೇಕು. ಆ ಭಾಗದಲ್ಲಿ ಸಾರಿಗೆಯು ಸುಗಮವಾಗಿ ನಡೆಯುವ ದಿಸೆಯಲ್ಲಿ ವಿನೂತನ ಸಲಹೆ, ಯೋಜನೆಗಳನ್ನು ಮುಂದಿಟ್ಟರೆ ಸಮಿತಿಗಳಿಗೆ ಸೂಕ್ತ ಪಾರಿತೋಷಕ ಲಬಿಸುತ್ತದೆ.